Index   ವಚನ - 63    Search  
 
ಹುಟ್ಟದೆ ಬ್ರಹ್ಮನ ಹಂಗಿನಲ್ಲಿ, ಬೆಳೆಯದೆ ವಿಷ್ಣುವಿನ ಹಂಗಿನಲ್ಲಿ, ಸಾಯದೆ ರುದ್ರನ ಬೆಂಬಳಿಯಲ್ಲಿ , ಹರಿಯಿತ್ತು ಬ್ರಹ್ಮನ ಬಲೆ, ಗುರುವಿನ ಕರದಲ್ಲಿ. ಬಿಟ್ಟಿತ್ತು ವಿಷ್ಣುವಿನ ಸುಖ, ಲಿಂಗದ ಅರ್ಪಿತದಲ್ಲಿ. ಮರೆಯಿತ್ತು ರುದ್ರನ ಮರಣ, ವಸ್ತುವಿನ ಮೂರ್ತಿಯಲ್ಲಿ. ಮತ್ತೆ ನಾನಿನ್ನಾರ ಕೇಳಿಹೆ? ಅಲೇಖನಾದ ಶೂನ್ಯ ಕಲ್ಲ ಬಿಟ್ಟ ತೆರನ ಕಂಡೆ.