ವೈಶೇಷಿಕವೇ ದ್ರವ್ಯ ಗುಣ, ಕರ್ಮ ಸಾಮಾನ್ಯ ವಿಶೇಷ ಸಮವಾಯವೆಂಬ
ಷಟ್ಪದಾರ್ಥ ಪ್ರತಿಪಾದಕತ್ವದಿಂ, ಪ್ರಪಂಚ ಸ್ವರೂಪಮಂ ವಿಭಾಗಿಸುತ್ತಿರ್ಕುಂ,
ಬಳಿಕ ಕಪಿಲ ಪತಂಜಲಿ ವ್ಯಾಸರೆಂಬ ಮುನಿಗಳಿಂ ಕ್ರಮದಿಂ ನಿರೂಪಿತಂಗಳಾದ
ಸಾಂಖ್ಯ ಪಾತಂಜಲ ವೇದಾಂತಗಳೆಂಬ ಆತ್ಮಜ್ಞಾನಫಲವಾಗುಳ್ಳವೆ ಆಧ್ಯಾತ್ಮಿಕ
ಶಾಸ್ತ್ರ ತ್ರಯಂಗಳವರಲ್ಲಿ ಸಾಂಖ್ಯವೆ ನಿತ್ಯನಿರ್ಮಲರಾದಾತ್ಮರ ಸನ್ನಿಧಾನದಿಂ
ಗುಣ ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಸನ್ನಿಧಾನದಿಂ ಗುಣ
ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಜಗವಾಗಿ ವ್ಯವಹರಿಸೂದೆ
ಸಂಸಾರ ಬಂಧವೆಂಬುದಂ ಸತ್ವಾದಿ ಗುಣತ್ರಯಾನುಕ್ರಮದಿಂ ಶ್ಲೇಷ್ಮಪ್ರಕೃತಿ ಪಿತ್ತ
ಪ್ರಕೃತಿ ವಾತಪ್ರಕೃತಿ[ಗಳುಳ್ಳ] ಶಾಂತಿಕ್ರೋಧಮೂಢತ್ವಾದಿ ಗುಣಾದಿಗಳಾದ
ಉತ್ತಮ ಮಧ್ಯಮ ಅಧಮ....ತ್ರಯದ....ಮೊದಲಾದವಂ ವಿಭಾಗಿಸೂ
ದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Vaiśēṣikavē dravya guṇa, karma sāmān'ya viśēṣa samavāyavemba
ṣaṭpadārtha pratipādakatvadiṁ, prapan̄ca svarūpamaṁ vibhāgisuttirkuṁ,
baḷika kapila patan̄jali vyāsaremba munigaḷiṁ kramadiṁ nirūpitaṅgaḷāda
sāṅkhya pātan̄jala vēdāntagaḷemba ātmajñānaphalavāguḷḷave ādhyātmika
śāstra trayaṅgaḷavaralli sāṅkhyave nityanirmalarādātmara sannidhānadiṁ
guṇa trayātmika prakr̥tiye pan̄cavinśatitatvātmaka sannidhānadiṁ guṇa
Trayātmika prakr̥tiye pan̄cavinśatitatvātmaka jagavāgi vyavaharisūde
sansāra bandhavembudaṁ satvādi guṇatrayānukramadiṁ ślēṣmaprakr̥ti pitta
prakr̥ti vātaprakr̥ti[gaḷuḷḷa] śāntikrōdhamūḍhatvādi guṇādigaḷāda
uttama madhyama adhama....Trayada....Modalādavaṁ vibhāgisū
dayyā śāntavīrēśvarā.