Index   ವಚನ - 9    Search  
 
[ಯಮನಿ]ಯಮಾದ್ಯಷ್ಟಾಂಗಯೋಗಗಳಿಂದಂ ಮನೋನಿಶ್ಚಲತೆಯಂ ಸಿದ್ಧಿ ಸೂದು. ಉತ್ತರವಿೂಮಾಂಸೆ...ಶಾಸ್ತ್ರವೆ ಪ್ರಪಂಚಕ್ಕೀ ಮಿಥ್ಯಾ....ಧಿಪುದರಿಂ ಬ್ರಹ್ಮಾತ್ಮೈಕ್ಯಮಂ ವರ್ಣಿಸುತ್ತಂ, ಭಾಸ್ಕರೀಯ ಮಾಯಾವಾದ ಶಬ್ದಬ್ರಹ್ಮವಾದ ಬ್ರಹ್ಮವಾದ ಕ್ರೀಡಾಬ್ರಹ್ಮವಾದವೆಂದು ನಾಲ್ಕು ತೆರನಾಗಿರ್ಕುಂ. ಬಳಿಕ ಮಾಯಾತತ್ತ್ವ ವಿದ್ಯಾತತ್ವವಾಸಿಗಳಾದ ತ್ರಿರುದ್ರರಿಂ ರಚಿತಂಗಳಾದ ಪಾಶುಪತ ಕಾಪಾಲಿಕ ಮಹಾವ್ರತಂಗಳೆಂಬವೆ ಅತಿಮಾರ್ಗಿಕಶಾಸ್ತ್ರತ್ರಯಂಗಳವರಲ್ಲಿ ಪಾಶುಪತವೆ ಮಾಯೆ ಕರ್ಮವೆಂಬ ಪಾಶದ್ವಯಾದಿಗಳಂ ನಿರ್ವಹಿಸೂದಯ್ಯಾ ಶಾಂತವೀರೇಶ್ವರಾ.