Index   ವಚನ - 10    Search  
 
ಕಾಪಾಲಿಕವೆ ನರಕಪಾಲ ಭಿಕ್ಷಾಟನಾದಿಗಳಂ ವಿವರಿಸೂದು. ಮಹಾವ್ರತವೆ ಅಸ್ಥಿಧಾರಣಾದಿಗಳಂ ವಿವರಿಸುತ್ತಿರ್ಕುಂ. ಬಳಿಕ ಪರಶಿವಪ್ರಣೀತಮಾದ ಶಾಸ್ತ್ರ ಮಂತ್ರವೆ ಮೋಕ್ಷಾಂಗಮಾದ ಕ್ರಿಯೆ ಚರ್ಯೆ ಯೋಗ ಜ್ಞಾನಾದಿಗಳಂ ಪ್ರಮಾ ಣಿಸುತ್ತಿರ್ಕುಂ, ಮತ್ತಮಾ ಸಮಸ್ತಮತಾಂತರಂಗಳಲ್ಲಿ ಪೇಳುವಾತ್ಮಸ್ವರೂ ಪವೆಂತೆನೆ: ದೇಹವೆ ಆತ್ಮನೆಂಬರು ಚಾರ್ವಾಕರು, ಇಂದ್ರಿಯಂಗಳೆ ಆತ್ಮನೆಂಬರು ಚಾರ್ವಾಕೈಕ ದೇಶಿಗಳು, ಪ್ರಾಣವೆ ಆತ್ಮನೆಂಬರು ಹಿರಣ್ಯಗರ್ಭರೆಂಬ ಚಾರ್ವಾ ಕೈಕ ದೇಶಿಗಳು. ಬಳಿಕ ದೇಹಾದಿ ವಿಲಕ್ಷಣನಾದೊರ್ವಾತ್ಮನು ದೇಹಪರಿಮಿತ ವಾಗಿ ಮಧ್ಯಪರಿಮಾಣತ್ವದಿಂ ಸಂಕೋಚ ವಿಕಾಸ ಧರ್ಮಯುಕ್ತನೆಂಬರು ಜೈನರು, ಬುದ್ಧಿಯೆ ಆತ್ಮನೆಂಬರು ಬೌದ್ಧರು, ಆನಂದವೆ ಆತ್ಮನೆಂಬರು ಕೋಳ ಯಾಮಳ ಶಾಕ್ತೇಯರುಗಳು, ಆತ್ಮನು ನಾಡಿಮಧ್ಯಗತನಾಗಿ ಅಣುಪರಿಮಾಣ ನೆಂಬರು ಪಾಂಚರಾತ್ರರು, ಆತ್ಮನು ದೇಹ ಪುತ್ರಾದಿ ರೂಪನೆಂಬರು ಲೌಕಿಕರು, ಆತ್ಮನು ಸ್ವತಃ ಪ್ರಮಾಣಜ್ಞಾನ ಸಮೇತನೆಂಬರು ವಿೂಮಾಂಸಕ ಭೇದಮಾದ ಭಾಟ್ಟಪ್ರಭಾಕರರುಗಳು, ಆತ್ಮನು ಗಗನದಂತೆ ಮಹತ್ವರಿಮಾಣನಾಗಿ ಪಾಷಾ ಣದಂತೆ ಜಡಸ್ವರೂಪನಾದೊಡಂ ಮನಃಸಂಯೋಗದಿಂ ಚಿದ್ಧರ್ಮಯುಕ್ತ ನೆಂಬರು ನೈಯಾಯಿಕ ವೈಶೇಷಿಕರುಗಳು, ಆತ್ಮನು ಅಸಚ್ಚಿನ್ಮಾತ್ರನೆಂಬರು ಸಾಂಖ್ಯ ಪಾತಂಜಲರುಗಳು,ಆತ್ಮನು ಜ್ಞಾಪ್ತಿಮಾತ್ರನೆಂಬರು ವೇದಾಂತಿಗಳು, ಆತ್ಮನು ನಿತ್ಯವ್ಯಾಪಕನೆಂಬರು ಪಾಶುಪತ ಕಾಪಾಲಿಕ ಮಹಾವ್ರತರುಗಳು, ಆತ್ಮನು ನಿತ್ಯವಾಪಕ ಜ್ಞಾನಕ್ರಿಯಾರೂಪನೆಂಬರು ಮಾಂತ್ರ ಸಂಜ್ಞಿತ ಸಿದ್ಧಾಂತಿಗ ಳೆಂದು ಪೃಥಕ್ಕರಿಸಲ್ವೇಳ್ಕುಂ ಶಾಂತವೀರೇಶ್ವರಾ. ಇಂತೀ ಮತಾಂತರಂಗಳ ಭಿನ್ನಾಚರಣೆವಿಡಿವನಲ್ಲಯ್ಯ ಶರಣ ಶಿವಾದ್ವೈ [ತಿ] ಯಾಗಿ, ಮಹಾಗುರುಶಾಂತ ವೀರಪ್ರಭುವೆ.