`ಇತಿ ವ್ರತಸಮಾಯುಕ್ತೋ ವೀರಶೈವೋ' ವಿಶಿಷ್ಟತೇ ಇತ್ಯಾದಿ ವ್ರತಂ
ಗಳೊಡನೆ ಮಾಡಿದಾತನೆ ವೀರಶೈವವನೆಂದು ವಿಶೇಷಿಸಲ್ಪಡುತ್ತಿಹನಯ್ಯ.
`ವಿಶೇಷ ಶೈವಮಾಖ್ಯಾತಂ ನಿರಾಭಾರಂ ತತಃ ಶ್ರುಣು' ಎಂದುದಾಗಿ, ಈ ಪ್ರಕಾರದಿಂ ವಿಶೇಷ
ವೀರಶೈವವೆಂಬ ಭಕ್ತಸ್ಥಲವು ಹೇಳಲ್ಪಟ್ಟಿತ್ತು. ಆನಂತರದಲ್ಲಿ
ನಿರಾಭಾರಿ ವೀರಶೈವವೆಂಬ ಜಂಗಮ ಸ್ಥಲಮಂ ಕೇಳೆಂದು ಈಶ್ವರನು ಷಣ್ಮುಖ
ದೇವರಿಗೆ ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Iti vratasamāyuktō vīraśaivō' viśiṣṭatē ityādi vrataṁ
gaḷoḍane māḍidātane vīraśaivavanendu viśēṣisalpaḍuttihanayya.
`Viśēṣa śaivamākhyātaṁ nirābhāraṁ tataḥ śruṇu' endudāgi, ī prakāradiṁ viśēṣa
vīraśaivavemba bhaktasthalavu hēḷalpaṭṭittu. Ānantaradalli
nirābhāri vīraśaivavemba jaṅgama sthalamaṁ kēḷendu īśvaranu ṣaṇmukha
dēvarige nirūpisuttirdanayya śāntavīrēśvarā.