ಬಳಿಕ ವಂಶಾಸನದಿಂ ದರಿದ್ರ, ಪಾಷಾಣಾಸನದಿಂ ವ್ಯಾಧಿ, ಭೂಮ್ಯಾಸ
ನದಿಂ ದುಃಖ ಮಂತ್ರಹಾನಿಗಳು, ದಾರುಕಾಸನದಿಂ ದುರ್ಭಾಗ್ಯ ವ್ಯಾಧಿಗಳು,
ತೃಣಾಸನದಿಂ ಯಶೋಹಾನಿ, ಪಲ್ಲವಾಸನದಿಂ ಚಿತ್ತಭ್ರಾಂತಿ, ಕೃಷ್ಣಾ
ಜಿನಾಸನದಿಂ ಜ್ಞಾನಾಸಿದ್ಧಿ, ವ್ಯಾಘ್ರಾ ಜಿನಾಚರ್ಮಾಸನದಿಂ ಮೋಕ್ಷಲಕ್ಷ್ಮಿ,
ವಸ್ತ್ರಾಸನದಿಂದ ವ್ಯಾಧಿ ನಿವೃತ್ತಿ, ಕಂಬಲಾಸನದಿಂ ಸುಖ್ಯತೆ, ಕೃಷ್ಣ ವಸ್ತ್ರಾಸನದಿಂ ಅಭಿಚಾರ ಕ್ರಿಯೆಗೆ, ರಕ್ತ ವಸ್ತ್ರಾಸನವೆ ವಶ್ಯಾದಿ ಕ್ರಿಯೆಗೆ, ಶುಭ್ರವಸ್ತ್ರಾಸನವೆ ಶಾಂತ್ಯಾಧಿವಿಧಿಗೆ, ಚಿತ್ರ ಕಂಬಲಾಸನವೆ ಸರ್ವಾರ್ಥಸಿದ್ಧಿಗಳಿವೆಂದು ಪೀಠಂಗಳಂ ಕುರುಹಿಟ್ಟು, ಬಳಿಕೆಂಬತ್ತನಾಲ್ಕಾಸನಂಗಳೊಳಗೆ ಸಿದ್ಧಾಸನ ಪದ್ಮಾಸನ ಸ್ವಸ್ತಿ
ಕಾಸನ ವೀರಾಸನ ಗೋಮುಖಾಸನ ಸುಖಾಸನಂಗಳೇ ಜಪಕರ್ಮಕ್ಕೆ ಯೋಗ್ಯ
ಮಾದಾ ಸನಂಗಳೆಂದು ಸುಸ್ಥಿರನಾಗಿ ಕುಳ್ಳಿರುವುದಯ್ಯ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷika vanśāsanadiṁ daridra, pāṣāṇāsanadiṁ vyādhi, bhūmyāsa
nadiṁ duḥkha mantrahānigaḷu, dārukāsanadiṁ durbhāgya vyādhigaḷu,
tr̥ṇāsanadiṁ yaśōhāni, pallavāsanadiṁ cittabhrānti, kr̥ṣṇā
jināsanadiṁ jñānāsid'dhi, vyāghrā jinācarmāsanadiṁ mōkṣalakṣmi,
vastrāsanadinda vyādhi nivr̥tti, kambalāsanadiṁ sukhyate, kr̥ṣṇa vastrāsanadiṁ abhicāra
Kriyege, rakta vastrāsanave vaśyādi kriyege, śubhravastrāsanave śāntyādhividhige, citra kambalāsanave sarvārthasid'dhigaḷivendu pīṭhaṅgaḷaṁ kuruhiṭṭu, baḷikembattanālkāsanaṅgaḷoḷage sid'dhāsana padmāsana svasti
kāsana vīrāsana gōmukhāsana sukhāsanaṅgaḷē japakarmakke yōgya
mādā sanaṅgaḷendu susthiranāgi kuḷḷiruvudayya śāntavīrēśvarā.