ಬಳಿಕ ವಾಹನ ಮಂಚ ತಲೆ ಸುತ್ತು ಕುಪ್ಪಸ ದಿಗಂಬರ ಮುಕ್ತಕೇಶ ಅಶುಚಿತ್ವ
ಬಹುಭಾಷಿ ಆಗುಳಿಗೆ ಸೀನು ತೂಕಡಿಗೆ ನಿಷ್ಟಿವನ ನೀಚಪ್ರಾಣಿದರ್ಶನ ಕ್ರೋಧ
ವ್ಯಾಕುಲತೆಗಳುಳ್ಳಾತನಾಗಿ ಜಪಿಸಲಾಗದೆಂದು, ನಿರ್ವಿಕಾರತ್ವದಿಂ ಕಾಷ್ಟಮೌನಿ
ಯಾಗಿ, ಸಮಗ್ರೀವ ಶಿರಃಶರೀರಿಯಾಗಿ, ಮನೋದೃಷ್ಟಿಗಳೇಕಾಗ್ರತೆಯಿಂ
ಧ್ಯಾನ ಮುದ್ರಾಸಮನ್ವಿತನಾಗಿ ಕುಳ್ಳಿರ್ದು, ಬಳಿಕ ಭಸಿತ ರುದ್ರಾಕ್ಷಾಭರಣ
ಗುರುಪಾದ ಸ್ಮರಣ ಪೂರ್ವಕಮಾಗಿ, ಮರಳಿ ಕನಿಷ್ಠ ಅನಾಮಿಕೆ ಆಂಗುಷ್ಟ
ಮೆಂಬಂಗುಲಿತ್ರಯದಿಂ ವಾಮದಕ್ಷಿಣ ನಾಸಾಪುಟಮಂ ಪಿಡಿದು, ಮೇಲೆ
ಬ್ರಹ್ಮಾಧಿದೇವತೆಯಪ್ಪು ಪ್ರಣವಾದಿಯಾದ ಆಕಾರಮಂತ್ರಮಂ ಆಕಾರ
ಮಂತ್ರಮಂ ಚಿಂತಿಸುತ್ತೆ, ಈಡೆಯೊಳ್ಪವನನಂ ತನ್ನ ಶಕ್ತ್ಯಾನುಸಾರದಿಂದುರದಲ್ಲಿ
ಪೂರಿಸಿ, ಬಳಿಕ ವಿಷ್ಣುವಧಿದೇವತೆಯಾದ ಪ್ರಣವ ಮಧ್ಯದಲ್ಲಿಪ್ಪ ಉಕಾರಮಂ
ಧ್ಯಾನಿಸುತ್ತಾ ಪೂರಿಸುತ್ತಾ ಪೂರಿಸಿದ ಪ್ರಾಣನನಲ್ಲಿಯೆ ಕುಂಭಿಸಿ, ಬಳಿಕ
ರುದ್ರಾದಿದೇವತ್ಮಾಕ್ರಮದ ಪ್ರಣವದಂತ್ಯಮಪ್ಪ ಮಕಾರಮಂ ಸ್ಮರಿಸುತ್ತ,
ಕುಂಭಿಸಿದ ವಾಯುಮಂ ಮೆಲ್ಲನ ಪಿಂಗಲೆಯಿಂ ರೇಚಿಸಿ, ಒಮ್ಮೆಲೆಯಾ ಮಂತ್ರ
ಕ್ರಮವಿಡಿದು, ಮತ್ತೆ ಪಿಂಗೆಲೆಯಿಂ ಪೂರಿಸುತ್ತುದರದಲ್ಲಿ ಕುಂಭಿಸುತ್ತೀಡೇಯಿಂ
ರೇಚಸುತ್ತಿಂತು ಪ್ರಾಣಾಯಾಮಕ್ರಮಂ ಮಾಡುವುದಯ್ಯ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷika vāhana man̄ca tale suttu kuppasa digambara muktakēśa aśucitva
bahubhāṣi āguḷige sīnu tūkaḍige niṣṭivana nīcaprāṇidarśana krōdha
vyākulategaḷuḷḷātanāgi japisalāgadendu, nirvikāratvadiṁ kāṣṭamauni
yāgi, samagrīva śiraḥśarīriyāgi, manōdr̥ṣṭigaḷēkāgrateyiṁ
dhyāna mudrāsamanvitanāgi kuḷḷirdu, baḷika bhasita rudrākṣābharaṇa
gurupāda smaraṇa pūrvakamāgi, maraḷi kaniṣṭha anāmike āṅguṣṭa
membaṅgulitrayadiṁ vāmadakṣiṇa nāsāpuṭamaṁ piḍidu, mēle
brahmādhidēvateyappu praṇavādiyāda ākāramantramaṁ ākāra
Mantramaṁ cintisutte, īḍeyoḷpavananaṁ tanna śaktyānusāradinduradalli
pūrisi, baḷika viṣṇuvadhidēvateyāda praṇava madhyadallippa ukāramaṁ
dhyānisuttā pūrisuttā pūrisida prāṇananalliye kumbhisi, baḷika
rudrādidēvatmākramada praṇavadantyamappa makāramaṁ smarisutta,
kumbhisida vāyumaṁ mellana piṅgaleyiṁ rēcisi, om'meleyā mantra
kramaviḍidu, matte piṅgeleyiṁ pūrisuttudaradalli kumbhisuttīḍēyiṁ
rēcasuttintu prāṇāyāmakramaṁ māḍuvudayya śāntavīrēśvarā.