Index   ವಚನ - 12    Search  
 
ಮರೀಚಿಕಾಜಲದಂತೆ ತೋರುತ್ತಿಹ ವಸ್ತು ನಾದಬಿಂದುವಿನಲ್ಲಿ ಒಡಗೂಡುವ ಪರಿಯಿನ್ನೆಂತೊ? ನಾದ ದೀರ್ಘವಾಗಿ, ಬಿಂದು ವರ್ತುಳವಾಗಿ, ಕಳೆ ಪರಿಪೂರ್ಣವಾಗಿ, ಅವಗವಿಸಲ್ಲದೆ ಉಭಯನಾಮವಡಗದು. ಅಡಗಿದ ಮತ್ತೆ ಈಶಾನ್ಯಮೂರ್ತಿ ಅಮೂರ್ತಿಯಾಯಿತ್ತು, ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.