ಆದಿವಸ್ತು, ಅನಾದಿವಸ್ತುವೆಂದು
ಭೇದವ ಮಾಡಿದಲ್ಲಿ,
ತನ್ನಿರವಿನ ಭೇದವೊ?
ವಸ್ತುವಿನ ಸ್ವಯರೂಪದಂಗವೊ?
ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕರೆಗುಂಟೆ?
ಆದಿ ಅನಾದಿ ವಸ್ತುವೆಂಬುದು ತನ್ನಯ
ಚಿತ್ತದ ಗೊತ್ತಲ್ಲದೆ ಅದು ನಿಶ್ಚಯ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ಏಕಮೂರ್ತಿ ಸ್ವಯಂಭು.
Art
Manuscript
Music
Courtesy:
Transliteration
Ādivastu, anādivastuvendu
bhēdava māḍidalli,
tanniravina bhēdavo?
Vastuvina svayarūpadaṅgavo?
Ikṣudaṇḍakke kaḍe naḍu modalallade sakkareguṇṭe?
Ādi anādi vastuvembudu tannaya
cittada gottallade adu niścaya,
īśān'yamūrti mallikārjunaliṅgavu
ēkamūrti svayambhu.