Index   ವಚನ - 65    Search  
 
ಶಿಲೆ ಕಾಷ್ಠದಲ್ಲಿ ಪಾವಕ ಜನಿಸುವ ಭೇದದಂತೆ, ಮಾಡುವ ಸತ್ಕ್ರೀ ಭೇದ. ಶಿಲೆಯ ವಹ್ನಿ ತಲೆದೋರಿ ಉಭಯವನುಳುಹಿದಂತೆ, ಗುರು ಚರದ ಯುಕ್ತಿ. ಕಾಷ್ಠದ ವಹ್ನಿ ತನ್ನಯ ಇರವ ಸುಟ್ಟು, ಹಲವು ಕಡೆಗೆ ಪರಿವಂತೆ, ಆತ್ಮನ ಭೇದ. ಇಂತೀ ನಾನಾ ವರ್ತಕಂಗಳಲ್ಲಿ ಕ್ರೀ ಶುದ್ಧವಾಗಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು