ವಾಗದ್ವೈತದಲ್ಲಿ ನಿಂದು,
ಸ್ವಯಾದ್ವೈತವನರಿಯಬೇಕು.
ಆ ಗುಣ ಸ್ವಯವಾಗಿ ನಿಂದು,
ಗುರುಮೂರ್ತಿಯಾಗಬೇಕು.
ಗುರುಮೂರ್ತಿ ನಿಶ್ಚಯವಾಗಿ ನಿಂದು,
ಚರಲಿಂಗದಲ್ಲಿ ನಿಃಪತಿಯಾಗಿ ನಿಂದುದು ದ್ವೈತ.
ಎರಡಳಿದು ಒಂದೆನಿಸಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
Art
Manuscript
Music
Courtesy:
Transliteration
Vāgadvaitadalli nindu,
svayādvaitavanariyabēku.
Ā guṇa svayavāgi nindu,
gurumūrtiyāgabēku.
Gurumūrti niścayavāgi nindu,
caraliṅgadalli niḥpatiyāgi nindudu dvaita.
Eraḍaḷidu ondenisi nindudu,
īśān'yamūrti mallikārjunaliṅgavu tāne.