Index   ವಚನ - 72    Search  
 
ಗುರುವೆಂದಡೂ ಕಾಯವುಳ್ಳನ್ನಕ್ಕ, ದೋಷಕ್ಕೆ ಹೊರಗಾಗಬೇಕು. ಲಿಂಗವೆಂದಡೂ ಪೀಠಕ್ಕೆ ಸಿಕ್ಕಿಹನ್ನಕ್ಕ, ಜಗದ ಆಗುಚೇಗೆಯನರಿಯಬೇಕು. ಜಂಗಮವೆಂದಡೂ ಸುಖದುಃಖವುಳ್ಳನ್ನಕ್ಕ, ಕಾಯವಿಡಿದು ಇಹ ಕಾರಣ, ಪಾಪ ತಾಪಕ್ಕೆ ಹೊರಗಾಗಬೇಕು. ಶೂನ್ಯವಾದಡೂ ಆ ಕುರುಹುಳ್ಳನ್ನಕ್ಕ, ಸುಖದುಃಖಕ್ಕೊಳಗು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದ