Index   ವಚನ - 104    Search  
 
ಹೇರನೊಪ್ಪಿಸಿದವಂಗೆ ಸುಂಕವ ಬೇಡಿ ಗಾರುಮಾಡಲೇತಕ್ಕೆ? ಮೊದಲು ತ್ರಿವಿಧವ ಎನಗೆಂದು ಕೊಟ್ಟು ಮತ್ತೆ; ನೀ ಬೇಡಿದಡೆ ನಿನಗಿತ್ತ ಮತ್ತೆ, ಎನ್ನಡಿಯ ನೋಡುವ ಬಿಡುಮುಡಿ ಯಾವುದು? ನಿನಗೆ ಶಿವಲೆಂಕ ಹಾಕಿದ ಮುಂಡಿಗೆಯ ನೀನೆತ್ತಲಮ್ಮದೆ, ಎನ್ನ ಕೈಯೊಳಗಾದೆಯಲ್ಲಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.