ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ,
ಮತ್ತಾ ಗುಣ ಸ್ವೀಕರಿಸಬಹುದೆ?
ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು,
ಮತ್ತೆಲ್ಲರಲ್ಲಿ ಬೆರಸಬಹುದೆ?
ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ,
ಮತ್ತಿವ ಒಡಗೂಡಬಹುದೆ?
ಇಂತೀ ಬಿಡುಗಡೆಯನರಿದಲ್ಲಿ,
ಅನುಸರಣೆಯ ಮಾಡಿದಡೆ,
ಎನ್ನೊಡೆಯ ಈಶಾನ್ಯಮೂರ್ತಿ
ಮಲ್ಲಿಕಾರ್ಜುನಲಿಂಗವಾದ
Art
Manuscript
Music
Courtesy:
Transliteration
Pātaka holeyendaridu biṭṭalli,
mattā guṇa svīkarisabahude?
Ivella allā endu ballatanava tānaridu,
mattellaralli berasabahude?
Oḍeda han̄ciṅge, hiḍidu biṭṭa vratakke,
mattiva oḍagūḍabahude?
Intī biḍugaḍeyanaridalli,
anusaraṇeya māḍidaḍe,
ennoḍeya īśān'yamūrti
mallikārjunaliṅgavādaḍū
haraśaraṇarige dūra.