Index   ವಚನ - 126    Search  
 
ಮಹಾರ್ಣವವುರಿದು ಬೇವಲ್ಲಿ, ಕರಗದ ಜಲಕ್ಕೆ ಹೊಡೆಗೆಡೆವುದೆ? ಮಹಾಪಾತಕಕ್ಕೆ ಒಳಗಾದಂಗೆ, ಮಾತಿನ ಬಣಬೆಯಲ್ಲಿ ನೀತಿಯಾಗಿ ನುಡಿದಡೆ, ಅಜಾತನ ಶರಣರು ಒಪ್ಪುವರೆ? ಅದು ನಿಹಿತವಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಇಂತೀ ಕಾಕರನೊಲ್ಲ.