ಪರಮಾರ್ಥದ ಪರೀಕ್ಷೆಯನರಿಯದೆ,
ನಿಂದಿಸಿ ನುಡಿವರ ಕಂಡಡೆ, ಏನೆಂಬೆನು?
ಅರಳಿಯ ಮರನುಲುಹೇಂಬೆನು.
ಮೂಗಜಾತಿಯ ಶಬುದವೆಂಬೆನು.
ಸಕಳೇಶ್ವರದೇವಾ,
ನಿಮ್ಮನುಭಾವವನರಿಯದವರ ಕಂಡೆನಾದಡೆ,
ಹಳಿಹಳಿಯೆಂಬೆನು.
Art
Manuscript
Music
Courtesy:
Transliteration
Paramārthada parīkṣeyanariyade,
nindisi nuḍivara kaṇḍaḍe, ēnembenu?
Araḷiya maranuluhēmbenu.
Mūgajātiya śabudavembenu.
Sakaḷēśvaradēvā,
nim'manubhāvavanariyadavara kaṇḍenādaḍe,
haḷihaḷiyembenu.