Index   ವಚನ - 79    Search  
 
ಶೂಲದಲ್ಲಿ ಏರಿಸಿದ ಹೆಣ, ಆಲುತ್ತ ಮಾತನಾಡುತ್ತದೆ. ಹೆಣ ಹೆಣಂ ತಾಗೆ ಶೂಲವನೊಡಗೂಡಿತ್ತು. ಶೂಲ ಕೊಲ್ಲದೆ ಆರೈವುತ್ತದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಅಂಗವ ತಾಳಿದ ಕಾರಣ.