ಸಾಕಾರವೆಂಬ ಚೀಲದಲ್ಲಿ,
ಪ್ರಕೃತಿ ವಿಕಾರವೆಂಬ ಭಂಡವ ತುಂಬಿ,
ಕ್ರಿಯಾ ಧರ್ಮಂಗಳೆಂಬ ದಾರವ ದಾರದಲ್ಲಿ ಸೇರಿಸಿ,
ಕಟ್ಟಲರಿಯದ ಅಣ್ಣಗಳಿಗೆ ಜಗಸೆಟ್ಟಿತನವೇಕೆ?
ಸುಂಕ ಸಿಕ್ಕಿತ್ತು, ಬಂಕೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
Sākāravemba cīladalli,
prakr̥ti vikāravemba bhaṇḍava tumbi,
kriyā dharmaṅgaḷemba dārava dāradalli sērisi,
kaṭṭalariyada aṇṇagaḷige jagaseṭṭitanavēke?
Suṅka sikkittu, baṅkēśvaraliṅgadalli.