ವೇಷ ಲಾಂಛನವೆಂಬ ಪಾಠದ ಹೊರೆಯ ಹೊತ್ತು,
ಬೆವಹಾರ ಮಾಡುವ ಹರದಿಗರೆಲ್ಲರೂ
ಹರದಿಗರಲ್ಲಾ ಹರವರಿಯಲ್ಲಿ.
ಉಭಯಮಾರ್ಗವ ಬಿಟ್ಟು,
ವೇಷತನದ ಕಳ್ಳಹಾದಿಯಲ್ಲಿ ಹೋಗಿ ಸಿಕ್ಕಿದಿರಿ,
ಕಾಲನ ಕಾಲಾಟಕ್ಕೆ ಬಂಕೇಶ್ವರಲಿಂಗಕ್ಕೆ
ಅರಿವಿನ ಸುಂಕದ ಪಥವ ತಪ್ಪಿ.
Art
Manuscript
Music
Courtesy:
Transliteration
Vēṣa lān̄chanavemba pāṭhada horeya hottu,
bevahāra māḍuva haradigarellarū
haradigarallā haravariyalli.
Ubhayamārgava biṭṭu,
vēṣatanada kaḷḷahādiyalli hōgi sikkidiri,
kālana kālāṭakke baṅkēśvaraliṅgakke
arivina suṅkada pathava tappi.