ಮಾಧವನ ಪಟ್ಟಣದಿಂದ ಓಡಿದರು
ಮೂವರು ಸೂಳೆಯರು.
ಅವರು ಹೋದ ಹಾದಿಯಲ್ಲದೆ,
ಬೇರೊಂದು ಹಾದಿಯಲ್ಲಿ
ಅರಸಿ ಕಂಡರು ಸೂಳೆಯರ.
ಅವರ ಮೂವರ ಸೆರೆಯ ವಿವರ:
ಬಾಯಿಗೆ ಕೋಳ, ಕಾಲಿಗೆ ನೂಲೆಳೆಯ ಕಟ್ಟು,
ಕೈಹೋಗದಂತೆ ಕೂರಲಗಿನ ಸಂಭವ ಕಟ್ಟು,
ಮೂವರ ಅಗಡ ಹಿಂಗಿತ್ತು.
ಇನ್ನೈವರ ಕೇಳಿ, ಬಂಕೇಶ್ವರಲಿಂಗವ.
Art
Manuscript
Music
Courtesy:
Transliteration
Mādhavana paṭṭaṇadinda ōḍidaru
mūvaru sūḷeyaru.
Avaru hōda hādiyallade,
bērondu hādiyalli
arasi kaṇḍaru sūḷeyara.
Avara mūvara sereya vivara:
Bāyige kōḷa, kālige nūleḷeya kaṭṭu,
kaihōgadante kūralagina sambhava kaṭṭu,
mūvara agaḍa hiṅgittu.
Innaivara kēḷi, baṅkēśvaraliṅgava.