Index   ವಚನ - 35    Search  
 
ಬಂದವರಿವರಾರು? ಅಂದಗೇಡಿಯ ಮೂಳಿಯ ಮಕ್ಕಳು. ಅವರು ಸಂದುಸಂದಿಗೆಲ್ಲಕ್ಕೂ ಕೊಂದಾಡುತ್ತಿರ್ಪರು. [ಖ]ಂಡವನೊಲ್ಲರು, ಹಿಡಿಖಂಡವ ತಿಂಬರು, ಅವರೆಂದಿಗೂ ಮೂಳಿಯ ಮಕ್ಕಳು. ಇದು ಸಂದೇಹವಲ್ಲ, ಬಂಕೇಶ್ವರಲಿಂ[ಗಾ].