ಅಸ್ಥಿ ಚರ್ಮವ ಪುದಿದ ಮರೆಯ ಹರಿಗೆಯೊಳು,
ಅಸುಭಟನೆಂಬ ಬಂಟ,
ದಶೇಂದ್ರಿಯನಪ್ಪ ಮಿಸುಗುವ ಕೂರಲಗಿನಲ್ಲಿ
ನಿರ್ಗತಿಯೆಂಬ ಪ್ರಮಥನೊಳು ಕದನವನೆಸಗೆ,
ಹುಸಿಕಾಯ ತೋರದ ಧನುವ ಜೇವಡೆಗೈದು,
ನಿರ್ಧರ ದಿವ್ಯಪ್ರಣಮವೆಂಬ
ಮೊನೆದೋರದ ಸರದಲ್ಲೆಸೆಯೆ,
ಅಸ್ಥಿ ಚರ್ಮದ ಪ್ರಕೃತಿಯ ಅಂಗದ
ನೇಮದ ಠಾವಿನಲ್ಲಿಬಿದ್ದುಕೊಂಡಿತ್ತು.
ಅವನಸುವ ನಿರ್ವಾಣದ ಕೂರಲಗು ಅರಿ ಇದಿರಿಲ್ಲ.
ಬಂಕೇಶ್ವರಲಿಂಗಕ್ಕೆ ಇದಿರಿಲ್ಲ.
Art
Manuscript
Music
Courtesy:
Transliteration
Asthi carmava pudida mareya harigeyoḷu,
asubhaṭanemba baṇṭa,
daśēndriyanappa misuguva kūralaginalli
nirgatiyemba pramathanoḷu kadanavanesage,
husikāya tōrada dhanuva jēvaḍegaidu,
nirdhara divyapraṇamavemba
monedōrada saradalleseye,
asthi carmada prakr̥tiya aṅgada
nēmada ṭhāvinallibiddukoṇḍittu.
Avanasuva nirvāṇada kūralagu ari idirilla.
Baṅkēśvaraliṅgakke idirilla.
ಸ್ಥಲ -
ಸದ್ಭಾವಭಕ್ತಿವಿರಕ್ತಿಲೇಪಸ್ಥಲ: