•  
  •  
  •  
  •  
Index   ವಚನ - 1591    Search  
 
ಹಸಿವು ತೃಷೆ ವಿಷಯ ವ್ಯಸನ ಈ ನಾಲ್ಕು ಉಳ್ಳವರು ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ? ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲ. ಅರಿದನಾದಡೆ ಹಸಿವ ಮೀರಿ ಉಂಬ, ತೃಷೆಯ ಮೀರಿ ಕೊಂಬ, ವಿಷಯವನಾಳಿಗೊಂಬ, ವ್ಯಸನವ ದಾಂಟಿ ಭೋಗಿಸುವ. ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು ಎನ್ನ ಮನ ನಾಚಿತ್ತು ಗುಹೇಶ್ವರಾ.
Transliteration Hasivu tr̥ṣe viṣaya vyasana ī nālku uḷḷavaru guhēśvaraliṅgadalli aikyarentapparo? Aridaridu ācarisalariyada kāraṇa liṅgaikyaralla. Aridanādaḍe hasiva mīri umba, tr̥ṣeya mīri komba, viṣayavanāḷigomba, vyasanava dāṇṭi bhōgisuva. Idanariyadale carisuva kīṭaka mānavara kaṇḍu enna mana nācittu guhēśvarā.
Hindi Translation भूख तृषा विषय व्यसन ये चार रहनेवाले गुहेश्वर लिंग में ऐक्य कैसे होंगे ? जान जानकर आचरण न जाने के कारण लिंगैक्य नहीं । जाने तो भूख उल्लंघन करखालेगा,तृषा को अतिक्रमण कर लेगा, विषय वश में रखेगा, व्यसन को लांघकर भोगेगा । इसे न जाने चलनेवाले कीटक मानवों को देख मेरा मन लजा था गुहेश्वरा। Translated by: Eswara Sharma M and Govindarao B N