ಪ್ರಾಣವ ಮಾರುವವರಿಂಗೆ ಪ್ರಾಣಲಿಂಗವೆಲ್ಲಿಯದೊ?
ಇಷ್ಟಲಿಂಗಪೂಜಕರೆಲ್ಲ ನೇಮವ ಮಾಡುತ್ತಿಪ್ಪರು.
ಸೂನೆಗಾರಂಗೆ ಪ್ರಸಾದವೆಲ್ಲಿಯದೊ ಗುಹೇಶ್ವರ.
Transliteration Prāṇava māruvavariṅge prāṇaliṅgavelliyado?
Iṣṭaliṅgapūjakarella nēmava māḍuttipparu.
Sūnegāraṅge prasādavelliyado guhēśvara.
Hindi Translation प्राण बेचनेवाले को प्राणलिंग कहाँ?
सब इष्टलिंग पूजक नियम पालन करते रहते हैं।
हत्यारे को प्रसाद कहाँ गुहेश्वरा ?
Translated by: Eswara Sharma M and Govindarao B N
Tamil Translation பிராணனை விற்பவனுக்குப் பிராணலிங்கத்தை அடையவியலுமோ?
இஷ்டலிங்கத்தைப் பூஜிப்பவரனைவரும் நியமமாற்றுவர்
கொலை காரனுக்குப் பிரசாதம் கிடைக்குமோ குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ನೇಮ = ಅರ್ಚಿಸುವುದು ಮತ್ತು ಅರ್ಪಿಸುವುದು, ಅದೂ ಯಾಂತ್ರಿಕವಾಗಿ;
Written by: Sri Siddeswara Swamiji, Vijayapura