•  
  •  
  •  
  •  
Index   ವಚನ - 1605    Search  
 
ಹೃದಯದಲ್ಲಿರ್ಪ ಮಹಾಲಿಂಗದ ಬೆಳಗಿನಿಂದ ನಾಸಿಕೆಯಲ್ಲಿ ಆಚಾರಲಿಂಗವ ಕಂಡೆನಯ್ಯಾ. ಜಿಹ್ವೆಯಲ್ಲಿ ಗುರುಲಿಂಗವ ಕಂಡೆನಯ್ಯಾ. ನೇತ್ರದಲ್ಲಿ ಶಿವಲಿಂಗವ ಕಂಡೆನಯ್ಯಾ. ತ್ವಕ್ಕಿನಲ್ಲಿ ಜಂಗಮಲಿಂಗವ ಕಂಡೆನಯ್ಯಾ. ಶ್ರೋತ್ರದಲ್ಲಿ ಪ್ರಸಾದಲಿಂಗವ ಕಂಡೆನಯ್ಯಾ. ಭಾವದಲ್ಲಿ ಮಹಾಲಿಂಗವ ಕಂಡೆನಯ್ಯಾ. ಇಂತೀ ಷಡ್ವಿಧಲಿಂಗವನು ಎನ್ನ ಸರ್ವಾಂಗದಲ್ಲಿ ಕಂಡು [ಮಹಾಲಿಂ]ಗವಾದೆನು ಕಾಣಾ ಗುಹೇಶ್ವರಾ.
Transliteration Hr̥dayadallirpa mahāliṅgada beḷagininda nāsikeyalli ācāraliṅgava kaṇḍenayyā. Jihveyalli guruliṅgava kaṇḍenayyā. Nētradalli śivaliṅgava kaṇḍenayyā. Tvakkinalli jaṅgamaliṅgava kaṇḍenayyā. Śrōtradalli prasādaliṅgava kaṇḍenayyā. Bhāvadalli mahāliṅgava kaṇḍenayyā. Intī ṣaḍvidhaliṅgavanu enna sarvāṅgadalli kaṇḍu [mahāliṁ]gavādenu kāṇā guhēśvarā.
Hindi Translation हृदय में रहे महालिंग के प्रकाश से नासिका में आचार लिंग देखा अय्या । जिह्वा में गुरुलिंग देखा अय्या । नेत्र में शिवलिंग देखा अय्या। त्वक् में जंगमलिंग देखा अय्या। भावमेंमहालिंगदेखाअय्या। ऐसे षड्विध लिंग को मेरे सर्वांग में देख महालिंग बना देख गुहेश्वरा । Translated by: Eswara Sharma M and Govindarao B N