ಅಯ್ಯಾ ಎನ್ನಂಗದ ಮೇಲಿಪ್ಪ ಲಿಂಗವು ಕರ್ಪುರದಂತಾಯಿತ್ತು.
ಎನ್ನ ಪ್ರಾಣದ ಮೇಲಿಪ್ಪ ಲಿಂಗವು ಪರಂಜ್ಯೋತಿಯಂತಾಯಿತ್ತು.
ಎನ್ನ ನಿಃಪ್ರಾಣದ ಮೇಲಿಪ್ಪ ಲಿಂಗವು ನಿರಂಜನದಂತಾಯಿತ್ತು.
ಈ ತ್ರಿವಿಧವು ಏಕವಾದ ಭೇದವ ಹೇಳಿಹೆನು ಕೇಳಿರಣ್ಣಾ!
ಎನ್ನ ಅಂಗದ ಮೇಲಿದ ಕರ್ಪುರದಂತಿರ್ದ ಲಿಂಗ,
ಪ್ರಾಣದ ಮೇಲಿಪ್ಪ ಪರಂಜ್ಯೋತಿ ಲಿಂಗವ ಬೆರೆಯಿತ್ತು .
ಎನ್ನ ಪ್ರಾಮದ ಮೇಲಿಪ್ಪ ಪರಂಜ್ಯೋತಿ ಲಿಂಗ,
ನಿಃಪ್ರಾಣದ ಮೇಲಿಪ್ಪ ನಿರಂಜನ ಲಿಂಗವ ಬೆರೆಯಿತ್ತು.
ಈ ತ್ರಿವಿಧವು ಏಕವಾದ ಮೇಲೆ, ಒಂದಲ್ಲದೆ ಎರಡುಂಟೆ?
ಇದಕ್ಕೆ ಸಂದೇಹ ಬೇರಿಲ್ಲವಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ayyā ennaṅgada mēlippa liṅgavu karpuradantāyittu.
Enna prāṇada mēlippa liṅgavu paran̄jyōtiyantāyittu.
Enna niḥprāṇada mēlippa liṅgavu niran̄janadantāyittu.
Ī trividhavu ēkavāda bhēdava hēḷihenu kēḷiraṇṇā!
Enna aṅgada mēlida karpuradantirda liṅga,
prāṇada mēlippa paran̄jyōti liṅgava bereyittu.
Enna prāmada mēlippa paran̄jyōti liṅga,
niḥprāṇada mēlippa niran̄jana liṅgava bereyittu.
Ī trividhavu ēkavāda mēle, ondallade eraḍuṇṭe?
Idakke sandēha bērillavayyā,
basavapriya kūḍalacennabasavaṇṇā.