Index   ವಚನ - 36    Search  
 
ಅಯ್ಯಾ, ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು ಜಗವೆಲ್ಲ. ಅದಂತಿರಲಿ. ಇನ್ನು ಆ ಶರಣರ ಮತವೆಂತೆಂದರೆ, ಹೊಟ್ಟೆ ಎಂಬುದನೆ ಮೆಟ್ಟಿಟ್ಟು ತೂರಿ, ಅಲ್ಲಿದ್ದ ಗಟ್ಟಿಯಾಗಿರ್ದ ಪ್ರಸಾದವನೆ ಊಟವೆಂದು ಹಿಡಿದು, ಮುಟ್ಟಿ ನಿಮ್ಮೊಳೊಡವೆರೆದು, ಬಟ್ಟಬಯಲಾದರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.