Index   ವಚನ - 85    Search  
 
ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ || ಎಂದುದಾಗಿ, ಓಂ ಎಂಬ ಶಬ್ದಕ್ಕೆ ಸಿಲುಕದ ನಿಶ್ಯಬ್ದಮಯಮಪ್ಪ ನಿರಾಲಂಬಮೂರ್ತಿ ಮದ್ಗುರುವೆ ಮನೋಹರ ಗುರುವೆ ವದನ ಮಾರ್ತಾಂಡ ಮಲಹರ ನಿರ್ಮಲ ಗುರುವೆ ನಿರುಪಮ ಗುರುವೆ ನಿರಂಜನ ಗುರುವೆ ನಿತ್ಯಪ್ರಸನ್ನ ಗುರುವೆ ಸತ್ಯಪ್ರಸಾದಿ ಗುರುವೆ ಭಕ್ತರ ಹೃತ್ಕಮಲವಾಸ ನಿವಾಸ ವರ ಮನೋಹರ ಗುರುವೆ ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ಕರುಣಾಕರನೆ.