Index   ವಚನ - 103    Search  
 
ಕೇಳು ಕೇಳಾ, ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯರೆಂದು ನುಡಿದಾಡುತಿಪ್ಪಿರಿ, ಇಂತೀ ಷಟ್‍ಸ್ಥಲ ಸಂಪನ್ನತೆ ಎಲ್ಲರಿಗೆ ಎಂತಾಯಿತ್ತಯ್ಯ ಹೇಳಿರಣ್ಣಾ! ಭಾಗ್ಯವುಳ್ಳಾತಂಗೆ ಭಕ್ತಿಸ್ಥಲವಾಗದು. ಮಕ್ಕಳುಳ್ಳಾತಂಗೆ ಮಹೇಶ್ವರಸ್ಥಲವಾಗದು. ಪರಧನ ಚೋರಂಗೆ ಪ್ರಸಾದಿಸ್ಥಲವಾಗದು. ಇಹಪರವೆಂದು ಕಾಮಿಸುವಾತಂಗೆ ಪ್ರಾಣಲಿಂಗಿಸ್ಥಲವಾಗದು. ಪರದಲ್ಲಿ ಪರಿಣಾಮವನರಿಯದಾತಂಗೆ [ಶರಣ]ಸ್ಥಲವಾಗದು. ಹರುಷವೇ ಹರನಲ್ಲಿ ಲೀಯವಾದಾತಂಗೆ ಐಕ್ಯಸ್ಥಲವಾಗದು. ನೆರೆದ ದೇಹವು ಕರ್ಪುರ ಉರಿಗೊಂಡಂತೆ ಅಲ್ಲದೆ ನಿರವಯಸ್ಥಲವಾಗದು. ಇದು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.