ಗುರುವಿನಿಂದಾದ ಪರಂ ಗೂಢಂ ಶರೀರ ಸ್ಥಲಂ.
ಲಿಂಗಕ್ಷೇತ್ರಮನಾದಿಯೆಂಬ
ಪಂಚಸಂಜ್ಞೆಯನುಳ್ಳ ಗುರುವಿನಿಂದಾದ ಕಾರಣ
ಗುರುವಿಂದ ಪರವಿಲ್ಲವೆಂದು ಒರೆವುತ್ತಿವೆ ನೋಡಾ
ವೇದಾಗಮ ಶಾಸ್ತ್ರ ಪುರಾಣಗಳು
ಇದು ಕಾರಣ, ನಿಮ್ಮ ಚರಣದ
ಕಿರಣವೆ ಅಖಿಳ ಬ್ರಹ್ಮಾಂಡವೆಂದು
ಆದಿ ಪರಮ ಪ್ರಣಮವೆಂದೊರಲುತ್ತಿವೆ,
ಪರಂಜ್ಯೋತಿ ಬಸವಪ್ರಿಯ
ಕೂಡಲಸಂಗಮದೇವ ಪ್ರಭುವೆ.