Index   ವಚನ - 115    Search  
 
ಚೌದಳ ಷಡುದಳ ದಶದಳ ದ್ವಾದಶದಳ ಷೋಡಶದಳ ದ್ವಿದಳ, ಒಳಹೊರಗಣ ಸ್ಥಳಕುಳವನರಿದು, ಬೆಳಗುವ ಬೆಳಗ, ಹೊಳೆವ ಪ್ರಭೆ ಪ್ರಜ್ವಲಿಸಿ ಕಳವಳವಳಿದು, ಕಾಯದ ಕದಳಿಯ ಗೆಲಿದು, ಕರಗಿ ಒಂದಾದ ಶರಣನೆ ಹರನು, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.