Index   ವಚನ - 125    Search  
 
ತನ್ನ ಮನೆಯನರಿಯದೆ ತವರುಮನೆಗೆ ಹಾರುವ ಹೆಣ್ಣಿನಂತೆ, ಭಿನ್ನವಿಟ್ಟು ನೋಡಿಹೆನೆಂದು, ನಿಮ್ಮನರಿಯದೆ ಕೆಟ್ಟಿತು ಜಗವೆಲ್ಲ. ಅದಂತಿರಲಿ, ಇನ್ನ ತನ್ನ ತಾನರಿದವಂಗೆ ತನುವೇ ಲಿಂಗ, ಮನವೇ ಪುಷ್ಪ. ಈ ಅನುವರಿದು, ಘನವ ನೆಮ್ಮಿದ ಶರಣರ ಎನಗೊಮ್ಮೆ ತೋರಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣ.