Index   ವಚನ - 162    Search  
 
ಮಾಡಿದ ಓಗರ ಮಾಡಿದಂತಿದ್ದಿತ್ತು, ನೀಡಿದ ಕೈಗಳೆಡೆಯಾಡುತ್ತಿರ್ದವು. ಲಿಂಗಕರ್ಪಿತವ ಮಾಡಿದೆವೆಂಬರು. ಒಂದರಲೊಂದು ಸವೆಯದು ನೋಡಾ. ಲಿಂಗವಾರೋಗಣೆಯ ಮಾಡಿದನೆಂಬರು, ತಾವುಂಡು ನಿಮ್ಮ ದೂರುವರು ಗುಹೇಶ್ವರಾ.