ಲಿಂಗಪೂಜೆಯ ಮಾಡುತ್ತ
ತಮ್ಮಂಗ ಸುಖದ ಸಲುವಾಗಿ
ಹಂಪೆಯ ಕಂಗಳರ ಹಾಗೆ ಕೂಗುತ್ತ, ಅರಚುತ್ತ,
ಸತಿಸುತರೊಳಗೆ ಹೊಡೆದಾಡುತಿಪ್ಪರಲ್ಲದೆ,
ಆ ಲಿಂಗಕ್ಕೆ ತನಗೆ ಒಡೆಯರಾಗಿದ್ದ
ಜಂಗಮ ಬಂದರೆ, ಎತ್ತಲೆಂದರಿಯರು.
ಇಂತಪ್ಪ ಕತ್ತಲೆಮನುಜರು, ಲಿಂಗವ ಕಟ್ಟಿದರೇನು ?
ಜಂಗಮಕಿಕ್ಕಿದರೇನು ? ಗುರುವಿಂಗೆ ಶರಣೆಂದರೇನು ?
ತಮ್ಮ ಮರಣಬಾಧೆಯ ಗೆಲುವನಕ ಹುರುಳಿಲ್ಲ ಹುರುಳಿಲ್ಲ .
ಮಾಡಿದ ಭಕ್ತಿ , ಅತ್ತಿಯ ಹಣ್ಣ ಬಿಚ್ಚಿದಂತೆ.
ಅವರು ಹೊತ್ತಿಪ್ಪ ವೇಷ ದೊಡ್ಡದು.
ಎಮ್ಮ ಸಮಯ ನಾನದನರಿದು,
ನಿಮ್ಮಲ್ಲಿ ನಿರ್ಮುಕ್ತನಾದ ಬಳಿಕ,
ಈ ಜಗವೇನಾದರೇನಯ್ಯ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
Art
Manuscript
Music
Courtesy:
Transliteration
Liṅgapūjeya māḍutta
tam'maṅga sukhada saluvāgi
hampeya kaṅgaḷara hāge kūgutta, aracutta,
satisutaroḷage hoḍedāḍutipparallade,
ā liṅgakke tanage oḍeyarāgidda
jaṅgama bandare, ettalendariyaru.
Intappa kattalemanujaru, liṅgava kaṭṭidarēnu?
Jaṅgamakikkidarēnu? Guruviṅge śaraṇendarēnu?
Tam'ma maraṇabādheya geluvanaka huruḷilla huruḷilla.
Māḍida bhakti, attiya haṇṇa biccidante.
Avaru hottippa vēṣa doḍḍadu.
Em'ma samaya nānadanaridu,
nim'malli nirmuktanāda baḷika,
ī jagavēnādarēnayya
basavapriya kūḍalacennabasavaṇṇā.