Index   ವಚನ - 217    Search  
 
ಸುಖಾನುಭಾವ, ಲಿಂಗಾನುಭಾವವೆಂದು ನುಡಿದಾಡುತಿಪ್ಪಿರಿ. ಲಿಂಗದ ನೆಲೆಯನಾರು ಬಲ್ಲರು? ಆರುಲಿಂಗ, ಮೂರುಲಿಂಗ, ಮೂವತ್ತಾರುಲಿಂಗ, ಬೇರೆ ಇನ್ನೂರ ಹದಿನಾರು ಲಿಂಗವೆಂದು ಎಮ್ಮ ಶರಣರು ಸಾರಿಹೋದ ವಾಕ್ಯವನೆ ಮಾರುತಿಪ್ಪರಲ್ಲದೆ, ಬೇರೆ ಇಪ್ಪತ್ತೊಂದು ಮಹಾಘನಲಿಂಗವನಾರೂ ಅರಿಯರು, ನಿಮ್ಮ ಶರಣರಲ್ಲದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.