Index   ವಚನ - 218    Search  
 
ಸುಪ್ರಭಾಕಳೆಯಿಂದ ಚಿತ್ಪ್ರಣಮ ಉದಯ. ಆ ಚಿತ್ಪ್ರಣಮದ ಮುಂದಣ ಚಿದ್ವಿವೇಕವೆ ಚಿದಬ್ಧಿ. ಆ ಚಿದಬ್ಧಿಯೆ ಪಾದೋದಕ, ಚಿದಮೃತವೆ ಪಾದೋದಕ. ನಿಧಿ ನಿಧಾನವೆ ಪಾದೋದಕ, ಸುಧೆ ಸುರರ ತೃಪ್ತಿಯೆ ಪಾದೋದಕ. ಅದಕ್ಕೆ ದೃಷ್ಟ: ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ | ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ || ಇಂತಪ್ಪ ಪಾದೋದಕವ ಕೊಂಡರೆ, ಪಾಶಮುಕ್ತನಾಗಿ, ಪಶುಪತಿಯೆಂಬುಭಯವಳಿದು, ನೀರು ಕ್ಷೀರ ಬೆರೆದಂತಿಪ್ಪ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ಮಾಂ ತ್ರಾಹಿ, ತ್ರಾಸಿ ಕರುಣಾಕರನೆ.