ಸ್ಥಲವೆಂದರೆ ಒಂದು, ನೆಲೆಯೆಂದರೆ ಎರಡು,
ಕಲೆಯೆಂದರೆ ಮೂರು, ಕರಣವೆಂದರೆ ನಾಲ್ಕು,
ಕಾಯವೆಂದರೆ ಐದು, ಕಾಮವೆಂದರೆ ಆರು,
ಸೀಮೆಯೆಂದರೆ ಏಳು, ನೇಮವೆಂದರೆ ಎಂಟು,
ತಾಮಸವೆಂದರೆ ಒಂಬತ್ತು, ಹರಿಯೆಂದರೆ ಹತ್ತು,
ಹರನೆಂದರೆ ಇನ್ನೊಂದು.
ಇದೇ ದಶವಿಧ ಪಾದೋದಕ, ಇದೇ ಏಕಾದಶ ಪ್ರಸಾದ.
ಇದೇ ಅರ್ಪಿತ, ಇದೇ ಅವಧಾನ, ಇದೇ ಸುಯಿದಾನ.
ಇದೇ ಶುದ್ಧಸಿದ್ಧಪ್ರಸಿದ್ಧ ಪ್ರಸಾದ.ಇದೇ ನಮ್ಮ
ಬಸವಪ್ರಿಯಕೂಡಲಚೆನ್ನಬಸವಣ್ಣ
ಆಡುವ ಹೊಲಸ್ಥಲದ ನೆಲೆ.
Art
Manuscript
Music
Courtesy:
Transliteration
Sthalavendare ondu, neleyendare eraḍu,
kaleyendare mūru, karaṇavendare nālku,
kāyavendare aidu, kāmavendare āru,
sīmeyendare ēḷu, nēmavendare eṇṭu,
tāmasavendare ombattu, hariyendare hattu,
haranendare innondu.
Idē daśavidha pādōdaka, idē ēkādaśa prasāda.
Idē arpita, idē avadhāna, idē suyidāna.
Idē śud'dhasid'dhaprasid'dha prasāda.Idē nam'ma
basavapriyakūḍalacennabasavaṇṇa
āḍuva holasthalada nele.