Index   ವಚನ - 223    Search  
 
ಹಗಲು ಗೂಗೆಗೆ ಇರುಳಾಗಿಪ್ಪುದು, ಇರುಳು ಕಪಟಗೆ ಹಗಲಾಗಿಪ್ಪುದು. ಇದು ಜಗದಾಟ. ಈ ಹಗಲು ಇರುಳೆಂಬ ಉಭಯವಳಿದು, ನಿಗಮಂಗಳಿಗೆ ನಿಲುಕದ, ಸಗುಣ ನಿರ್ಗುಣ ಅಗಮ್ಯ ಅಗೋಚರವಪ್ಪ ಮಹಾಘನ ಗುರುವಿನ ನೆಲೆಯ, ನಿಮ್ಮ ಶರಣರು ಬಲ್ಲರಲ್ಲದೆ ಮತ್ರ್ಯದ ಮರಣಬಾಧೆಗೊಳಗಾಗುವ ಮನುಜರೆತ್ತ ಬಲ್ಲರೊ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ!