Index   ವಚನ - 228    Search  
 
ಹಲವಂದ ಚಂದದಲ್ಲಿ ಹಾಡಿದರೇನಯ್ಯ, ಲಿಂಗದ ನೆಲೆಯನರಿಯದನ್ನಕ್ಕ? ಕಲಿಯಾಗಿ ವೈರಾಗ್ಯ ತಲೆಗೇರಿ ಹರಿದಾಡಿದರೇನಯ್ಯ? ಮಾಯೆಯ ಬಲೆಯ ನುಸುಳಿಸಿದಲ್ಲದೆ ನಿಮ್ಮ ನೆಲೆಯ ಕಾಣಬಾರದು, ಬಸಪ್ರಿಯ ಕೂಡಲಚೆನ್ನಬಸವಣ್ಣಾ.