Index   ವಚನ - 236    Search  
 
ಹುಟ್ಟಲೇಕೊ ನರರ ಜನ್ಮದಲ್ಲಿ? ಕಟ್ಟಲೇಕೋ ಕೊರಳಲ್ಲಿ ಲಿಂಗವ? ಕಟ್ಟಿಯೂ ಕಾಣದೆ, ತೊಟ್ಟನೆ ತೊಳಲಿ, ಅರಸಲೇಕೊ ಧರೆಯ ಮೇಲೆ? ಅರಸಿಯೂ ಕಾಣದೆ, ಸತ್ತು ಮೆಟ್ಟಿ ಮೆಟ್ಟಿ ಹೂಳಿಸಿಕೊಳಲೇಕೊ? ಇದನರಿದರಿದು, ಹುಟ್ಟು ಹೊಂದಳಿದ ಶರಣರ ನಿತ್ಯನಿತ್ಯ ನೆನೆದು ಬದುಕಿದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.