Index   ವಚನ - 237    Search  
 
ಹುಟ್ಟಿದ ಮನುಜರೆಲ್ಲ ಹೊಟ್ಟೆಯ ಹೊರೆವುದೇನು ಸೋಜಿಗವೊ? ಹುಲುಹೆಣನ ಸುಟ್ಟು, ಹೊಲೆಯನು ಹೊಟ್ಟೆಯ ಹೊರೆವುತ್ತ ಅವನೆ ಸಂತೆಯಲ್ಲಿ ಎದೆಯ ಮೇಲೆ ಕಲ್ಲಹಾಕಿಕೊಂಬವನು, ಹೊಟ್ಟೆಯ ಹೊರೆವುತ್ತಲವನೆ ಉಲಿ ಉಲಿದು ಕಂಡವರಿಗೆ ಹಲುಗಿರಿವವನು. ಹೊಟ್ಟೆಯ ಹೊರೆವುತ್ತ, ಅವನು, ಈ ಲಿಂಗದ ನೆಲೆಯನರಿಯದವರು ಇವರೊಳು ಸಲುವರಲ್ಲದೆ ಎಮ್ಮ ಶರಣರಿಗೆ ನಿಲುಕರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.