Index   ವಚನ - 239    Search  
 
ಹುಡಿಯ ಹಾರಿಸಿ ಅಡಗಿಸುವ ವಾಯು ಅಡಗಿ ತೋರುವ ಬೆಡಗಿನಂತೆ, ಪ್ರಾಣಲಿಂಗಿಯ ಅಂಗ. ಅಂಗವಡಗಿದಲ್ಲಿ ವಾಯುವಿಂಗೆ ಭಂಗವೊ? ಅಲ್ಲಾ, ನುಡಿದವರ ನುಡಿಗೆ ಭಂಗವೊ? ಇದರ ತೊಡಕ ತಿಳಿದಾತನೆ ಮೃಡನು, ಬಸವಪ್ರಿಯ ಕೂಡಲಚೆನ್ನಬಸವಣ್ಣ ಪ್ರಭುವೆ.