Index   ವಚನ - 25    Search  
 
ಉಪನಿಷದ್ವಾಕ್ಯವೆನಬಹುದಲ್ಲದೆ, ಆ ಪರಬ್ರಹ್ಮವೆನಬಾರದು ಸಮತೆ ಸಮಾಧಾನವೆಂಬುದು ಯೋಗದಾಗು ನೋಡಾ. ಸಮತೆ ಸಮಾಧಾನ ನೆಲೆಗೊಳ್ಳದಿರ್ದಡೆ, ಆ ಯೋಗ ಅಜ್ಞಾನದಾಗು. ಅಷ್ಟಶಿಲೆ ಸಹಸ್ರ ಋಷಿಯರು ಸಮತೆ ಸಮಾಧಾನ ನೆಲೆಗೊಳ್ಳದೆ, ನಾನಾ ಯೋನಿಯಲ್ಲಿ ಬಂದರು. ಮಹಾಲಿಂಗ ಕಲ್ಲೇಶ್ವರದೇವಾ, ಸಮತೆ ನೆಲೆಗೊಂಡು, ಸಮಾಧಾನ ಸಹಜವಾದುದೆ ಮುಕ್ತಿ ಕ್ಷೇತ್ರ.