ಎನ್ನ ಗುರುವೆನ್ನ ಪ್ರಾಣಲಿಂಗವ
ಕರುಣದಿಂದನುಗ್ರಹವ ಮಾಡಿದ ಪರಿ ಎಂತೆಂದಡೆ:
ಪಚ್ಚೆಯ ನೆಲಗಟ್ಟಿನ ಮೇಲೆ ಚೌಮೂಲೆಯ ಸರಿಸದಲ್ಲಿ.
ಷೋಡಷ ಕಂಬಂಗಳ ಮಂಟಪವ ಮಾಡಿ,
ಮಧ್ಯದಲ್ಲಿ ಕುಳ್ಳಿರ್ದು ಉಪದೇಶದ ಪಡೆಯಲೆಂದು ಹೋದಡೆ,
ಎನ್ನಂತರಂಗದಲ್ಲಿ ಚತುಷ್ಕೋಣೆಯ
ಚತುರ್ದಳದ ನೆಲಗಟ್ಟಿನ ಮೇಲೆ
ಷೋಡಷಕಲೆಗಳೆಂಬ ಹದಿನಾರುಕಂಬವ ನೆಟ್ಟು,
ಧ್ಯಾನ ವಿಶ್ರಾಮದ ಮೇಲೆ
ಆದಿಮಧ್ಯತ್ರಿಕೂಟವೆಂಬ ಮಂಟಪವನಿಕ್ಕೆ,
ಆ ಮಂಟಪಸ್ಥಾನದಲ್ಲಿ ಎನ್ನ ಗುರು ಕುಳ್ಳಿರ್ದು
ಅನುಗ್ರಹವ ಮಾಡಿದಡೆ,
ನುಡಿಯಡಗಿದ, ಒಡಲಳಿದ
ಸ್ವಯಲಿಂಗಸಂಬಂಧವಾದ ಭೇದವ
ಮಹಾಲಿಂಗಕಲ್ಲೇಶ್ವರಾ, ನಿಮ್ಮ ಶರಣ ಬಲ್ಲ.
Art
Manuscript
Music
Courtesy:
Transliteration
Enna guruvenna prāṇaliṅgava
karuṇadindanugrahava māḍida pari entendaḍe:
Pacceya nelagaṭṭina mēle caumūleya sarisadalli.
Ṣōḍaṣa kambaṅgaḷa maṇṭapava māḍi,
madhyadalli kuḷḷirdu upadēśada paḍeyalendu hōdaḍe,
ennantaraṅgadalli catuṣkōṇeya
caturdaḷada nelagaṭṭina mēle
ṣōḍaṣakalegaḷemba hadinārukambava neṭṭu,
dhyāna viśrāmada mēle
ādimadhyatrikūṭavemba maṇṭapavanikke,
ā maṇṭapasthānadalli enna guru kuḷḷirdu
anugrahava māḍidaḍe,
nuḍiyaḍagida, oḍalaḷida
svayaliṅgasambandhavāda bhēdava
mahāliṅgakallēśvarā, nim'ma śaraṇa balla.