ಎಲ್ಲವನರಿದು ಇಲ್ಲವೆ ತಾನಾದ,
ಅಲ್ಲಹುದೆಂಬುದಕ್ಕೆ ಸಹಜನಾದ.
ಆಕಾರವ ನಿರಾಕರಿಸ, ನಿರಾಕಾರವ ಪತಿಕರಿಸ,
ಭಾವದಾಕಾರವನೇನೆಂದರಿಯ,
ಮುಂದೆ ಬಲ್ಲೆವೆಂಬನುಭಾವಿಗಳ
ಮಾತುಗುಷ್ಟನಾರೂದ ಕಂಡು,
ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣ ಶಬ್ದಮುಗ್ಧವಾದ.
Art
Manuscript
Music
Courtesy:
Transliteration
Ellavanaridu illave tānāda,
allahudembudakke sahajanāda.
Ākārava nirākarisa, nirākārava patikarisa,
bhāvadākāravanēnendariya,
munde ballevembanubhāvigaḷa
mātuguṣṭanārūda kaṇḍu,
mahāliṅga kallēśvarā,
nim'ma śaraṇa śabdamugdhavāda.