Index   ವಚನ - 32    Search  
 
ಏಕ ಏವ ರುದ್ರ ನ ದ್ವಿತೀಯಃ'ನೆಂಬ ಶ್ರುತಿ, ಲಿಂಗಭಕ್ತನೆ ದೇವನೆಂದಿತ್ತು. `ಅಪಿ ವಾಯಶ್ಚಂಡಾಲೊ'ಯೆಂಬ ಶ್ರುತಿ, ಲಿಂಗಭಕ್ತನೆ ಕುಲಜನೆಂದಿತ್ತು. `ಘ್ರಾತಂ ಜಿಘ್ನಂತಿ'ಯೆಂಬ ಶ್ರುತಿ, ಲಿಂಗಪ್ರಸಾದವೆ ಪರವೆಂದಿತ್ತು. ಇದನೋದಿ ಬರುದೊರೆವೋದಿರಿ, ಶ್ರುತಿಬಾಹ್ಯರಾದಿರಿ, ಶಿವಭಕ್ತಿಯಿಲ್ಲದೆ ಹೋದಿರಿ. ಗುರುಲಿಂಗಜಂಗಮ ಪಾದೋದಕ ಪ್ರಸಾದವ ಧರಿಸುವನೆ, ಭಜಿಸುವನೆ, ಕುಲಜನೆಂದು ಶ್ರುತಿ ಸಾರುತ್ತಿದೆ. ಇದುಕಾರಣ,ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಮಿಗೆ ಮಿಗೆ ಶರಣೆಂಬೆ.