ತನ್ನ ಗುಣವ ಹೊಗಳಬೇಡ,
ಇದರ ಗುಣವ ಹಳೆಯಬೇಡ.
ಕೆಮ್ಮೆನೊಬ್ಬರ ನುಡಿಯಬೇಡ,
ನುಡಿದು ನುಂಪಿತನಾಗಬೇಡ.
ಇದಿರ ಮುನಿಯಿಸಬೇಡ, ತಾ ಮುನಿಯಬೇಡ.
ತಾನು ಬದುಕವೈಸುದಿನ, ಸಮತೆ ಸಮಾಧಾನ
ತುಂಬಿ ತುಳುಕದಿರಬೇಕು.
ಮಹಾಲಿಂಗ ಕಲ್ಲೇಶ್ವರದೇವರ ನಿಚ್ಚಳ ನಿಜವನರಿದಡೆ,
ಬಚ್ಚಬರಿಯ ಸಹಜ ಸಮಾಧಾನವಳವಟ್ಟಿರಬೇಕು.
Art
Manuscript
Music
Courtesy:
Transliteration
Tanna guṇava hogaḷabēḍa,
idara guṇava haḷeyabēḍa.
Kem'menobbara nuḍiyabēḍa,
nuḍidu numpitanāgabēḍa.
Idira muniyisabēḍa, tā muniyabēḍa.
Tānu badukavaisudina, samate samādhāna
tumbi tuḷukadirabēku.
Mahāliṅga kallēśvaradēvara niccaḷa nijavanaridaḍe,
baccabariya sahaja samādhānavaḷavaṭṭirabēku.