Index   ವಚನ - 64    Search  
 
ನಿಮ್ಮ ನೆನವ ಮನಕ್ಕೆ ಜ್ಞಾನಸಿದ್ಧಿಯೆಂತಪ್ಪುದೆಂದರಿಯೆನಯ್ಯಾ. ಕರ್ಮದೊಳಗಣ ಬಯಲಮೋಹವೆನ್ನ ಬೆನ್ನ ಬಿಡದು. ಅನ್ಯವಿಷಯ ಭಿನ್ನ ರುಚಿಯಲೆನ್ನ ಮನವು ಹರಿವುದ ಮಾಣದನ್ನಕ್ಕರ, ನಿಮ್ಮ ನೆನೆದೆಹೆನೆಂಬ ಮನದ ಕಲಿತನವ ನೋಡಾ, ಮಹಾಲಿಂಗ ಕಲ್ಲೇಶ್ವರಾ!