ಪರಸ್ತ್ರೀಯರ ರೂಪ ಕಾಯದ ಕಣ್ಣಿನಲ್ಲಿ ಕಂಡು,
ಮನ ಹರಿದು, ತನು ಕರಗಿ ಬೆರಸಿದ
ಬಳಿಕ ಸಂಗವಲ್ಲದೇನು ಹೇಳಾ!
ಮನ ಬೆರಸಿ, ತನು ತಳಿತು,
ಇಂದ್ರಿಯಂಗಳು ತುಳುಕಿದ ಬಳಿಕ,
ಸಂಗವಲ್ಲದೇನು ಹೇಳಾ?
ಮಹಾಲಿಂಗ ಕಲ್ಲೇಶ್ವರ ಬಲ್ಲ ಸಿದ್ಧರಾಮನ ಪರಿಯ.
ಮನದ ಹಾದರಿಗನು ಶಬ್ದ ರುಚಿಕರನು.
Art
Manuscript
Music
Courtesy:
Transliteration
Parastrīyara rūpa kāyada kaṇṇinalli kaṇḍu,
mana haridu, tanu karagi berasida
baḷika saṅgavalladēnu hēḷā!
Mana berasi, tanu taḷitu,
indriyaṅgaḷu tuḷukida baḷika,
saṅgavalladēnu hēḷā?
Mahāliṅga kallēśvara balla sid'dharāmana pariya.
Manada hādariganu śabda rucikaranu.