Index   ವಚನ - 69    Search  
 
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆನೆಂದು ಗೋಪಿದೇವಿಯೆಂಬ ಗೋವ ಕಡಿದು, ಹಂಚಿ ತಿಂದು ಗೋಮಾಂಸವನು ಅತ್ಯಂತ ಜನವಿಪ್ಪೆವೆಂದು ಮತ್ತೆ ಮಹಿಷಿಯನು ಹೋತನನು ಕೊಂದು, ಚಿಕ್ಕವಾಗಿ ಕಡಿಕಡಿದು ತಿಂಬುದಂ ಕಂಡು, ಮಿಕ್ಕ ಹದಿನೆಂಟು ಜಾತಿಯ ನಿಮ್ಮ ವಿಪ್ರರ ಕೈಯಲ್ಲಿ ಅನುಗ್ರಹವ ಕೊಂಡು ತಿನಕಲಿತರು ಇದಕ್ಕೆ ನಿಮ್ಮ ವೇದಾಗಮಂಗಳ ಶ್ರುತಿ: ಶ್ವಪಚೋಪಿ ಸಮೋವಿಪ್ರ ಜಾತಿಬೇಂದಂ ನಕಾರಯೇತ್ ಅಜಹತ್ಯೋಪದೇಶೀನಾಂ ವರ್ಣಾನಾಂ ಬ್ರಾಮಣೋಗುರು:|| ಎಂಬುದಾಗಿ ಕಿರಿಕಿರಿದ ವ್ಯಾಧರು ದ್ವಿಜರು ವೈಕುಂಠಕ್ಕೆ ಹೋಹರೆ? ಒಂದೊಂದ ತಿಂದ ವ್ಯಾಧರು ದ್ವಿಜರಿಂದ ಅಧಿಕರು ಅದೆಂತೆಂದಡೆ: "ಓಂ ಭರ್ಗೋದೇವಸ್ಯ ಧೀಮಹಿ" ಎಂಬ ದೇವ ಮಂತ್ರವನೆ ಕಲಿತು ನಿರ್ಬುದ್ದಿಯಾದಿರಿ, ಬರುದೊರೆಯೋದಿರಿ ನಿಮ್ಮ ಸ್ವಯವಚನ ವಿರೋಧವಾಯಿತ್ತು ಆ ವೇದರುಗಳು ಈ ದಿವ್ಯಮಂತ್ರವನರಿಯರು ಅದು ಕಾರಣ ಅವರಿಗದು ಸಹಜವಯ್ಯ ಮಹಾಲಿಂಗ ಕಲ್ಲೇಶ್ವರ ದೇವ ಇದನರಿದು ನಿಮ್ಮ ಶರಣರಿಗೆ ಸರಿಯೆ ಜಗದ ಜಂಗುಳಿಗಳು